Lets Help Yakshagana Kalavida Ishwaraprasad PV

ಸಮಾಜದ ಬಂಧುಗಳಿಗೆ ನಮಸ್ಕಾರಗಳು 🙏 ನನ್ನ ಹೆಸರು ಈಶ್ವರಪ್ರಸಾದ್ ಪಿ. ವಿ. ಯಕ್ಷಗಾನ ರಂಗಭೂಮಿಯಲ್ಲಿ ಕಳೆದ  29 ವರ್ಷಗಳಿಂದ ಕಲಾವಿದ ವೃತ್ತಿಯಲ್ಲಿ ನಿರತನಿದ್ದೇನೆ. ನಮ್ಮ ಯಕ್ಷಗಾನ ಮೇಳವು ನವೆಂಬರ್ ನಿಂದ ಮೇ ತಿಂಗಳ ವರೆಗೆ ನಡೆಯುತ್ತದೆ. ಜೂನ್ ನಿಂದ ಅಕ್ಟೋಬರ್ ವರೆಗೆ ಮೇಳ ಇಲ್ಲದಿದ್ದರೂ ಅಲ್ಲಲ್ಲಿ ಯಕ್ಷಗಾನ, ತಾಳಮದ್ದಳೆ ( ಬೈಟೆಕ್ ) ನಡೆದಾಗ ಕರೆ ಇದ್ದಲ್ಲಿ  ಭಾಗವಹಿಸುವುದು ರೂಡಿ. ಇಲ್ಲದಿದ್ದರೆ ಪರಿಕರ್ಮ, ಅಡುಗೆ ಯವರ ಜೊತೆಗೆ ಸಹಾಯಕ, ಯಾವುದಾದರು ಟೆಂಪಲ್ ಪೂಜೆ ಇತ್ಯಾದಿ ಜೀವನೋಪಾಯ ವೃತ್ತಿ ಮಾಡುತ್ತಿದ್ದೆ. ಆದರೆ 2 ವರ್ಷ ದಿಂದ ಕೊರೋನಾ ಕಾರಣ ಯಕ್ಷಗಾನ ಮೇಳವಿಲ್ಲದೆ ಜೀವನ ಹಾಗು ಕಲೆಯ ನಿರ್ವಹಣೆ ಕಷ್ಟವಾಗಿದೆ.




ಬೇರೆ ವೃತ್ತಿಯು ಇಲ್ಲದಾಯಿತು. ಜೀವನ ನಿರ್ವಹಣೆ ಕಷ್ಟ ಆಯ್ತು. ಒಂದಿಬ್ಬರು ಕೊಟ್ಟ ಆಹಾರ ಕಿಟ್ ಆಸರೆ ಆಯ್ತು ಬಿಟ್ಟರೆ ಬೇರೇನು ಇಲ್ಲ. ಪತ್ನಿ,3 ಮಕ್ಕಳು, 74 ವರ್ಷದ ತಾಯಿ ಜೊತೆಗೆ ನನ್ನ ಬದುಕು. 2 ಮಕ್ಕಳು  ಶಾಲೆ,ಒಬ್ಬಳು ಕಾಲೇಜು ಅಭ್ಯಾಸ. ತಾಯಿ ಅನಾರೋಗ್ಯ. ಅವರ ಔಷಧಿ, ಮನೆ ಸಾಮಾನಿನ ಸಂಗ್ರಹ, ಕರೆಂಟ್ ಬಿಲ್, ಗ್ಯಾಸ್, ಎಲ್ಲವೂ ಕಷ್ಟ ಆಗಿದೆ. ನನ್ನ ಮನೆ ದಕ್ಷಿಣಕನ್ನಡ ಜಿಲ್ಲೆಯ ಸೌತ್ತಡ್ಕ ಮಹಾಗಣಪತಿ ಟೆಂಪಲ್ ನಿಂದ 8 k. M. ದೂರ ದ ಬೂದುಜಾಲು ಎಂಬಲ್ಲಿ. 

ದಯವಿಟ್ಟು ಸಮಾಜದ ಸಂಘ, ಸಮಾಜ ಬಂಧುಗಳೇ ನನಗೆ ಆಸರೆ ಎಂದು ನಂಬಿ ಈ ಮೆಸ್ಸೇಜ್ ಹಾಕಿದ್ದೇನೆ. ಸೋಲಿನ, ಸಾಲದ, ಪ್ರಪಾತದಲ್ಲಿ ಇದ್ದೇನೆ. ಮೇಲೆ ಎದ್ದು ನಿಲ್ಲಲು ಹೊರೆಯಾಗಿದೆ. ದಯವಿಟ್ಟು ಕರುಣೆ ಇರಿಸಿ ಸಹಾಯ ಮಾಡಬೇಕೆಂದು ಪ್ರಾರ್ಥಿಸುತ್ತೇನೆ 🙏

ಕಲೆ ಹಾಗು ಕಲಾವಿದನ ಪೋಷಣೆ ಸಮಾಜದ ಹೊಣೆಯೆಂದು ಭಾವಿಸಿದ್ದೇನೆ. ದಯವಿಟ್ಟು ಸಹಕರಿಸಿ.


Share your Well Wishes


Raghavendra HS
BooduJaalu

Co-Campaigner: Raghavendra H S
Beneficiary: Ishwaraprasad PV

₹ 25200 raised of ₹ 100000 Goal

25%
  • 0 Days left
  • 17 Backers


ಹೆಸರು ಈಶ್ವರಪ್ರಸಾದ್ ಪಿ. ವಿ. ಯಕ್ಷಗಾನ ರಂಗಭೂಮಿಯಲ್ಲಿ ಕಳೆದ 29 ವರ್ಷಗಳಿಂದ ಕಲಾವಿದ ವೃತ್ತಿಯಲ್ಲಿ ನಿರತನಿದ್ದೇನೆ. ಆದರೆ 2 ವರ್ಷ ದಿಂದ ಕೊರೋನಾ ಕಾರಣ ಯಕ್ಷಗಾನ ಮೇಳವಿಲ್ಲದೆ ಜೀವನ ಹಾಗು ಕಲೆಯ ನಿರ್ವಹಣೆ ಕಷ್ಟವಾಗಿದೆ.






Campaign Disclaimer: The pitch, information and the opinions, expressed in this campaign page are those of the campaigner, users or beneficiaries, and not CrowdKash. If such claims are found to be not true, CrowdKash, in its sole discretion, has the right to stop the campaign, and refund the contributions to respective contributors.